ಮಂಡ್ಯ ಕಾಂಗ್ರೆಸ್ ಶೀತಲ ಸಮರ ತಪ್ಪಿಸಲು ರಮ್ಯಾ ಕ್ಷೇತ್ರ ಬದಲಾವಣೆ? | Oneindia Kannada

Oneindia Kannada 2017-11-15

Views 1.7K

ಅಂಬರೀಶ್, ರಮ್ಯಾ ನಡುವೆ ಶೀತಲ ಸಮರ ಉಂಟಾಗುವುದನ್ನು ತಪ್ಪಿಸಲು ಕರ್ನಾಟಕ ಕಾಂಗ್ರೆಸ್ ಸಂಧಾನ ಸೂತ್ರವೊಂದನ್ನು ಸಿದ್ಧಪಡಿಸಿದೆ. ರಮ್ಯಾ ಅವರಿಗೆ ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸುವ ಸಾಧ್ಯತೆ ಇದೆ. ಎರಡು ದಿನಗಳಿಂದ ಮಂಡ್ಯದ ರಾಜಕೀಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಅಂಬರೀಶ್, ಮಾಜಿ ಸಂಸದೆ ರಮ್ಯಾ ಪ್ರಯತ್ನ ನಡೆಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.ಅಂಬರೀಶ್ ಜೆಡಿಎಸ್ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿಯನ್ನು ಜಿಲ್ಲಾ ಜೆಡಿಎಸ್ ಘಟಕ ತಳ್ಳಿ ಹಾಕಿದೆ. ಅಂಬರೀಶ್ ಮತ್ತು ರಮ್ಯಾ ನಡುವಿನ ಶೀತಲ ಸಮರದಿಂದಾಗಿ ಪಕ್ಷಕ್ಕೆ ಆಗುವ ಹಾನಿ ತಪ್ಪಿಸಲು ಕಾಂಗ್ರೆಸ್ ಸೂತ್ರವೊಂದನ್ನು ಸಿದ್ಧಪಡಿಸಿದೆ.ಮೇಲುಕೋಟೆ ಕ್ಷೇತ್ರದ ಸದ್ಯದ ಶಾಸಕರು ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ. ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ರೈತ ಸಂಘ ಪ್ರಬಲವಾಗಿದೆ. ರಮ್ಯಾ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಿ ಕ್ಷೇತ್ರವನ್ನು ವಶಕ್ಕೆ ಪಡೆದುಕೊಳ್ಳುವುದು ಕಾಂಗ್ರೆಸ್ ತಂತ್ರವಾಗಿದೆ...

Is Ramya going to contest in a new constituency . State congress may have come up with this new idea to avoid the current cold war that is happening between Ramya and Ambrish

Share This Video


Download

  
Report form
RELATED VIDEOS