ಕರ್ನಾಟಕ ಚುನಾವಣೆ 2018 : ಬಿ ಎಸ್ ಯಡಿಯೂರಪ್ಪ ಹಾಗು ಸೊಗಡು ಶಿವಣ್ಣ ನಡುವೆ ಶೀತಲ ಸಮರ | Oneindia Kannada

Oneindia Kannada 2017-11-09

Views 1K

ಸೊಗಡು ಶಿವಣ್ಣನ ಬೇಟೆಯಾಡಲು ಮತ್ತೆ ಬಿಲ್ಲು ರೆಡಿ ಮಾಡಿಕೊಂಡ ಬಿಎಸ್ ವೈ. ಮಾಜಿ ಸಚಿವ ಸೊಗಡು ಶಿವಣ್ಣ ಅವರನ್ನು ಪಕ್ಷದಿಂದ ಹೊರ ಹಾಕಲು ಮತ್ತೊಮ್ಮೆ ಬಿಎಸ್ ಯಡಿಯೂರಪ್ಪ ಕಸರತ್ತು ನಡೆಸಿದ್ದಾರೆ, ಶಿವಣ್ಣ ಅವರು ಬಿಜೆಪಿ ರಥಯಾತ್ರೆ ಬಗ್ಗೆ ಪಕ್ಷ ವಿರೋಧಿ ಹೇಳಿಕೆ ನೀಡಿದ್ದಾರೆಂದು ಹೈಕಮಾಂಡ್ ಬಳಿಗೆ ಕಂಪ್ಲೆಂಟ್ ಕೊಂಡೊಯ್ಯಲು ಯಡಿಯೂರಪ್ಪ ನಿಧಾರಿಸಿದ್ದಾರೆ.ಮಂಗಳೂರಿನಲ್ಲಿ ನವೆಂಬರ್ 9ರಂದು ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುತ್ತಿರುವುದುರಿಂದ ಜಿಲ್ಲೆಗೆ ಆಗಮಿಸಿ ಪುತ್ತೂರಿನ ಮಹಾಲಿಂಗೇಶ್ವರ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ಇದೇ ವೇಳೆ ಮಾತನಾಡಿದ ಬಿಎಸ್ ವೈ, "ಬಿಜೆಪಿ ಯಾತ್ರೆಯ ಕುರಿತು ಪಕ್ಷ ವಿರೋಧಿ ಹೇಳಿಕೆ ನೀಡಿರುವ ಸೊಗಡು ಶಿವಣ್ಣ ವಿರುದ್ಧ ಕ್ರಮಕ್ಕೆ ಹೈಕಮಾಂಡ್ ಗೆ ಮನವಿ ಮಾಡಲಾಗುವುದು, ಈ ಹಿಂದೆಯೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ ಶಿವಣ್ಣನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿತ್ತು ಎಂದು ಹೇಳಿದರು.
Take action against Sogadu Shivanna for anti-party statement about BJP Nava Karnataka Parivartana Yatra said B S Yeddyurappa in Puttur, Dakshina Kannada district on November 9th.

Share This Video


Download

  
Report form
RELATED VIDEOS