Bigg Boss Kannada Season 5 : ಹಾಲು ಬಚ್ಚಿಟ್ಟಿದ್ದಕ್ಕೆ ಸೆಲೆಬ್ರಿಟಿಗಳ ಮೇಲೆ ಗರಂ ಆದ ವೀಕ್ಷಕರು

Filmibeat Kannada 2017-11-07

Views 1.1K

Bigg Boss Kannada 5: Week 3: Viewers are annoyed with celebrity contestants for hiding milk. Celebrity contestants gets trolled on Social Media.

'ಬಿಗ್ ಬಾಸ್' ಮನೆಯಲ್ಲಿದ್ದಾರೆ ಹಾಲು ಕಳ್ಳರು: ಛೀಮಾರಿ ಹಾಕಿದ ವೀಕ್ಷಕರು.! ಒಂದೇ ಒಂದು ಲೋಟ ಹಾಲು ಕೇಳಿದ್ದಕ್ಕೆ, 'ಬಿಗ್ ಬಾಸ್' ಮನೆಯಲ್ಲಿ ಅಲ್ಲೋಲ ಕಲ್ಲೋಲವೇ ನಡೆದು ಹೋಗಿದೆ. ಸಮೀರಾಚಾರ್ಯ ಒಂದು ಲೋಟ ಹಾಲು ಕೇಳಿದಾಗ, ಪ್ಯಾಕೆಟ್ ಗಟ್ಟಲೆ ಹಾಲನ್ನ ಮುಚ್ಚಿಟ್ಟಿದ್ದರೂ (ಎತ್ತಿಟ್ಟಿದ್ದರೂ), ಅದನ್ನ ಕೊಡಲು 'ಸೆಲೆಬ್ರಿಟಿ' ಸ್ಪರ್ಧಿಗಳು ರೆಡಿ ಇರಲಿಲ್ಲ. ಇದೇ ವಿಚಾರಕ್ಕೆ ಪಂಚಾಯತಿ ಕೂಡ ನಡೆಯಿತು. ಮಾಡಿದ ತಪ್ಪನ್ನ ಒಪ್ಪಿಕೊಳ್ಳದೆ, ಸಮರ್ಥನೆ ಕೊಡಲು ಶುರು ಮಾಡಿದ ಸೆಲೆಬ್ರಿಟಿ ಸ್ಪರ್ಧಿಗಳನ್ನ ಸುದೀಪ್ ಕೂಡ ತರಾಟೆಗೆ ತೆಗೆದುಕೊಂಡರು. ಇಷ್ಟೆಲ್ಲ ಬೆಳವಣಿಗೆಯನ್ನು ಗಮನಿಸಿದ 'ಬಿಗ್ ಬಾಸ್' ವೀಕ್ಷಕರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.ಹಾಲನ್ನ ಮುಚ್ಚಿಟ್ಟ (ಎತ್ತಿಟ್ಟ) ಸ್ಪರ್ಧಿಗಳಿಗೆ ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪುಟದಲ್ಲಿಯೇ 'ಬಿಗ್ ಬಾಸ್' ವೀಕ್ಷಕರು ಛೀಮಾರಿ ಹಾಕುತ್ತಿದ್ದಾರೆ. ಹಾಲನ್ನ ಮುಚ್ಚಿಟ್ಟು ರಾದ್ಧಾಂತ ಮಾಡಿದ 'ಬಿಗ್ ಬಾಸ್' ಸ್ಪರ್ಧಿಗಳ ಬಗ್ಗೆ ವೀಕ್ಷಕರು ಎಷ್ಟು ಗರಂ ಆಗಿದ್ದಾರೆ ಅನ್ನೋದಕ್ಕೆ ಈ ಕಾಮೆಂಟ್ ಸಾಕ್ಷಿ.

Share This Video


Download

  
Report form
RELATED VIDEOS