In India, people celebrate different types of vrat and each has a different meaning from the other. Tulasi puja is one of the important vrats that is celebrated in India on during the Kartik masam, according to the Hindu calendar. Popularly, Tulasi puja is also known as the Kartika Pournami or Utwana Dwadasi. To the Hindus, Tulasi is regarded as a holy plant and it is used to offer to the Gods. Another interesting thing about using tulasi is that this is the only thing that you can wash and reuse while worshiping, as tulasi leaves are known as self-purifying plants. Utwan Dwadashi or Tulasi Pooja is celebrated on 12th Day of Karthik Masa. This year on Nov 1st Hindus are celebrating Tulasi Pooja. Watch video to know the significance of the holy festival.
ತುಳಸಿ ಎಂದರೆ ಒಸಿಮಮ್ ಬೆಸಿಲಿಕಂ ಎಂಬ ಸಸ್ಯಶಾಸ್ತ್ರೀಯ ಹೆಸರು ಪಡೆದ, ಲಾಮಿಯಾಸಿಯೇ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಔಷಧೀಯ ಸಸ್ಯ ಎಂದರೆ ಸಸ್ಯಶಾಸ್ತ್ರದ ವಿದ್ಯಾರ್ಥಿಗಳು, ವಿದೇಶಿಯರು ತಲೆಯಲ್ಲಾಡಿಸಬಹುದು. ಆದರೆ ಹಿಂದುಗಳ ಪಾಲಿಗೆ ಈ ತುಳಸಿ ಎಂದರೆ ಇಷ್ಟೇ ಅಲ್ಲ. ಸಮುದ್ರ ಮಂಥನದ ಸಮಯದಲ್ಲಿ ಅವತರಿಸಿದ ತುಳಸಿಯನ್ನು ಮನೆಯ ಮುಂಬದಿಯ ಅಂಗಳದಲ್ಲಿ ಬೆಳೆಸಿ ಪ್ರತಿದಿನ ಪೂಜಿಸುವವರು ನಾವು, ಅದಕ್ಕೊಂದು ಕಟ್ಟೆ ಕಟ್ಟಿ ಒಪ್ಪವಾಗಿ ಕಾಪಿಟ್ಟವರು ನಾವು, ಪ್ರತಿವರ್ಷ ಉತ್ಥಾನ ದ್ವಾದಶಿಯಂದು ವಿಷ್ಣು ಸ್ವರೂಪಿ ನೆಲ್ಲಿ ಗಿಡದೊಂದಿಗೆ ತುಳಸಿಯ ವಿವಾಹವನ್ನು ಶ್ರದ್ಧಾ ಭಕ್ತಿಯಿಂದ ಮಾಡಿ ಹಿಗ್ಗುವವರು ನಾವು!ನ.1, ಬುಧವಾರದಂದು ಉತ್ಥಾನ ದ್ವಾದಶಿ. ಪ್ರತಿವರ್ಷ ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ತುಳಸಿ ವಿವಾಹ ಮಾಡುವ ಪರಿಪಾಠ ನಮ್ಮಲ್ಲಿ ಎಂದಿನಿಂದಲೋ ನಡೆದುಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನಾಳೆಯ ಮದುವೆಗೆ ಸಿದ್ಧತೆ ನಡೆಸುತ್ತಿರುವ ಎಲ್ಲ ಹೆಂಗೆಳೆಯರಿಗೂ ತುಳಸಿ ವಿವಾಹದ ಕುರಿತ ಒಂದಷ್ಟು ಉಪಯುಕ್ತ ಮಾಹಿತಿ ಇಲ್ಲಿದೆ.