ಕನ್ನಡ ಒಂದು ಅದ್ಭುತ ಭಾಷೆ ಎಂಬುದಕ್ಕೆ ಇಲ್ಲಿವೆ ನೋಡಿ 10 ಸಾಕ್ಷಿ! "ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು" ಎಂದು ರಾಷ್ಟ್ರಕವಿ ಕುವೆಂಪು ಅವರು ಹೇಳಿದ್ದರಲ್ಲಾಗಲೀ, "ಕನ್ನಡವೆಂದರೆ ಬರಿ ನುಡಿಯಲ್ಲ, ಹಿರಿದಿದೆ ಅದರರ್ಥ; ಜಲವೆಂದರೆ ಕೇವಲ ನೀರಲ್ಲ, ಅದು ಪಾವನ ತೀರ್ಥ" ಎಂದು ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ಬರೆದಿದ್ದರಲ್ಲಾಗಲೀ ಖಂಡಿತ ಉತ್ಪ್ರೇಕ್ಷೆಯಿಲ್ಲ. ಏಕೆಂದರೆ ಕನ್ನಡ ಭಾಷೆಗಿರುವ ಮಹತ್ವವೇ ಅಂಥದ್ದು.ಕನ್ನಡ ಭಾಷಿಕರ ಒಕ್ಕೂಟದಿಂದ ಕರ್ನಾಟಕವೆಂಬ ರಾಜ್ಯ ಸ್ಥಾಪನೆಯಾಗಿದ್ದು ನವೆಂಬರ್ 1, 1956 ರಲ್ಲಿ. ಅಂದಿನಿಂದ ಪ್ರತಿವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.ಕನ್ನಡಕ್ಕಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಶ್ರಮಿಸಿದ ಮಹನೀಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸೇರಿದಂತೆ, ಈ ದಿನ ಕನ್ನಡಕ್ಕೆ ಸಂಬಂಧಿಸಿದ ಹತ್ತು ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದಾದ, ಸುಮಾರು ಎರಡೂವರೆ ಸಹಸ್ರಮಾನಗಳ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆ ಕನ್ನಡಕ್ಕೆ ಸಂಬಂಧಿಸಿದ ಕೆಲವು ಅದ್ಭುತ ಸಂಗತಿಗಳನ್ನು ಸ್ಮರಿಸುವುದು ಸಂದರ್ಭೋಚಿತ.
Kannada, the one language which resides in the heart of every Kannadiga. Here are 10 lesser known and wonder factors about Kannada language which undoubtedly increases every Kannadiga's love towards his language. The state government made elaborate preparations to observe the Karnataka Rajyotsava or Karnataka Formation Day (literally 'Birth of the Kannada State').