ಅಂತೂ ಉಪೇಂದ್ರರ ಹೊಸ ಪಕ್ಷ 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ' ಘೋಷಣೆ ಮಾಡಿದ್ದಾರೆ.ಅವರ ಪಕ್ಷದ ಲಾಂಛನ ಆಟೋ. ಒಂದು ದಿನ ಮುಂಚಿತವಾಗಿ ಕನ್ನಡ ರಾಜ್ಯೋತ್ಸವ ಹೇಳುವ ಮೂಲಕ ನಟ-ನಿರ್ದೇಶಕ ಉಪೇಂದ್ರ ಎಲ್ಲರಿಗೂ ಸ್ವಾಗತ ಕೋರಿದರು. ತಮ್ಮ ಹೊಸ ರಾಜಕೀಯ ಪಕ್ಷದ ಹೆಸರೂ ಸೇರಿದಂತೆ ಇತರ ಮಾಹಿತಿಗಳನ್ನು ನೀಡಲು ಮಂಗಳವಾರ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು ಉಪೇಂದ್ರ.ಉಪೇಂದ್ರರ ಪತ್ನಿ, ತಾಯಿ ಸೇರಿದಂತೆ ಇತರ ಕುಟುಂಬ ಸದಸ್ಯರೂ ಈ ಸಂದರ್ಭದಲ್ಲಿ ಖಾಕಿ ಷರ್ಟ್ ಧರಿಸಿದ್ದರು. ಉಪೇಂದ್ರರನ್ನು ಬೆಂಬಲಿಸಲು ಬಂದಿದ್ದ ಹಲವರು, ಉಪೇಂದ್ರ ಕೂಡ ಖಾಕಿ ಅಂಗಿ ತೊಟ್ಟಿದ್ದರು. ಶಮಿತಾ ಮಲ್ನಾಡ್ ಅವರು ಗಣಪತಿ ಪ್ರಾರ್ಥನೆ ಹಾಗೂ ಕುವೆಂಪು ಅವರ ತನುವು ನಿನ್ನದು ಹಾಡನ್ನು ಹಾಡಿದರು.ವೇದಿಕೆಯ ಮೇಲಿದ್ದ ಪತ್ರಕರ್ತರು ದೀಪ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Upendra announces new political party Karnataka Prajnavanta Janata Party in Bengaluru Gandhi bhavan on Tuesday.