ಈ ಬಗ್ಗೆ ಟ್ವೀಟ್ ಮಾಡಿದ್ದ ಗಾಯಕ ಸೋನು ನಿಗಮ್ ''ನಾನು ಎಲ್ಲ ರಾಷ್ಟ್ರಗಳ ರಾಷ್ಟ್ರಗೀತೆಯನ್ನು ಗೌರವಿಸುತ್ತೇನೆ. ಒಂದು ವೇಳೆ ಪಾಕಿಸ್ತಾನದ ರಾಷ್ಟ್ರಗೀತೆ ಹೇಳುತ್ತಿದ್ದರೆ ನಾನು ಎದ್ದು ನಿಲ್ಲುತ್ತೇನೆ. ಈ ಮೂಲಕ ಆ ರಾಷ್ಟ್ರದ ಹಾಗೂ ಅಲ್ಲಿಯ ಜನರಿಗೆ ಗೌರವ ನೀಡುತ್ತೇನೆ. ಇದರಲ್ಲಿ ತಪ್ಪೇನು ಇಲ್ಲ. ಥಿಯೇಟರ್ ಹಾಗೂ ರೆಸ್ಟೋರೆಂಟ್ ಗಳು ರಾಷ್ಟ್ರಗೀತೆ ಹೇಳಲು ಸೂಕ್ತ ಸ್ಥಳವಲ್ಲ'' ಎಂದಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ನಟಿ ವಿದ್ಯಾ ಬಾಲನ್ ''ನನ್ನ ಪ್ರಕಾರ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಗಾಯನ ಅಗತ್ಯವಿಲ್ಲ. ರಾಷ್ಟ್ರಗೀತೆಯೊಂದಿಗೆ ದಿನ ಆರಂಭಿಸಲು ಅದೇನೂ ಸ್ಕೂಲ್ ಅಲ್ಲ. ರಾಷ್ಟ್ರಭಕ್ತಿಯನ್ನು ಬಲವಂತವಾಗಿ ಹೇರಲು ಸಾಧ್ಯವಿಲ್ಲ. ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡಿಸಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ'' ಎಂದು ನಟಿ ವಿದ್ಯಾ ಬಾಲನ್ ತಿಳಿಸಿದ್ದಾರೆ.''ನಾನು ನನ್ನ ರಾಷ್ಟ್ರವನ್ನು ಪ್ರೀತಿಸುತ್ತೇನೆ. ನಾನು ಎಷ್ಟೇ ದೂರ ಹೋದರೂ ನನ್ನ ರಾಷ್ಟ್ರ ಪ್ರೇಮವನ್ನು ಉಳಿಸಿಕೊಳ್ಳತ್ತೇನೆ. ಅದನ್ನು ನಾನು ಹೇಳುವ ಅವಶ್ಯಕತೆ ಇಲ್ಲ. ರಾಷ್ಟ್ರಗೀತೆ ನನಗೆ ಎಲ್ಲೇ ಕೇಳಿಸಲಿ, ನಾನು ಎಲ್ಲಿದ್ರೂ ಎದ್ದು ನಿಲ್ಲುತ್ತೇನೆ' ಎಂದು ವಿದ್ಯಾ ಬಾಲನ್ ತಿಳಿಸಿದ್ದಾರೆ.
The Supreme Court ordered that national anthem will be mandatory in cinema theaters. Accordingly, the national anthem is being screened in all the theaters and in all the shows in the country.Singer Sonu Nigam has tweeted about this,"I respect the national anthem of all nations. If Pakistan's national anthem is saying, I stand up. So I respect the nation and the people there. There is no error here.he said Theater and restaurants are not an ideal place for national anthem, .watch this video