ಕನ್ನಡ ಬಿಗ್ ಬಾಸ್ ನ ಐದನೇ ಸೀಸನ್ ನಡೆಯುತ್ತಿದೆ. ಆ ಮನೆಯೊಳಗಿನವರ ನಡವಳಿಕೆ, ಅಲ್ಲಿನ ಟಾಸ್ಕ್ ಗಳಲ್ಲಿ ಸ್ಪರ್ಧಿಗಳು ಪಾಲ್ಗೊಳ್ಳುವ ರೀತಿ, ಸಣ್ಣ ಪುಟ್ಟ ಜಗಳಗಳು, ವಿಪರೀತ ಎನಿಸುವಷ್ಟು ವಾದ, ನಾಟಕೀಯತೆ ಇವೆಲ್ಲವನ್ನೂ ಎಲ್ಲ ವರ್ಗದ ನೋಡುಗರೂ ಇಷ್ಟಪಡ್ತಾರಾ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಆದರೆ, ಇಂಥದ್ದೊಂದು ಪೊಲಿಟಿಕಲ್ ಬಿಗ್ ಬಾಸ್ ಮಾಡಿದರೆ, ಅದರಲ್ಲಿ ಸ್ಪರ್ಧಿಗಳಿಗೆ ಇವರೆಲ್ಲ ಇದ್ದರೆ ಹೇಗಿರುತ್ತದೆ ಎಂಬ ಸಣ್ಣದೊಂದು ಕುತೂಹಲ ನಮ್ಮದು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಒಂದೇ ಮನೆಯಲ್ಲಿ ಇದ್ದು, ಸ್ಪರ್ಧೆ ಅಂತ ಮಾಡಿದರೆ ನೋಡುಗರು ಹೇಗೆ ತೆಗೆದುಕೊಳ್ಳಬಹುದು ಎಂಬ ಬಗ್ಗೆಯೂ ಪ್ರಶ್ನೆ ಇದೆ.. ಕನಿಷ್ಠ ಪಕ್ಷ ಒಂದು ಇಡೀ ದಿನವಾದರೂ ಇಂಥ ಸ್ಪರ್ಧೆ ಯಾರಾದರೂ ಆಯೋಜಿಸಿದರೆ ಹೇಗಿರುತ್ತದೆ? ಬಿಡಿ, ಕುತೂಹಲ ಹಾಗೂ 'ರೆ'ಗಳಿಗೆ ಕೊನೆಯೇ ಇಲ್ಲ. 'ಒನ್ಇಂಡಿಯಾ' ಕನ್ನಡದ ಓದುಗರು ಏನೆಂದು ಕೊಳ್ಳುತ್ತಾರೆ ಎಂಬುದಂತೂ ತಿಳಿದುಕೊಳ್ಳುವ ಕುತೂಹಲ ಇದ್ದೇ ಇದೆ. ಇಲ್ಲಿ ನಾವು ಹೆಸರಿಸಿರುವ ಸ್ಪರ್ಧಿಗಳನ್ನು ಹೊರತುಪಡಿಸಿಯೂ ಯಾರನ್ನಾದರೂ ಸೂಚಿಸುವುದಿದ್ದರೆ ಕಾಮೆಂಟ್ ಮಾಡಿ