'ಲಂಡನ್ ' ನಲ್ಲಿ ಪ್ರಶಸ್ತಿ ಪಡೆದು ಬಂದ ದರ್ಶನ್ ಮಾಡಿದ ಟ್ವೀಟ್ ಏನು? | Filmibeat Kannada

Filmibeat Kannada 2017-10-29

Views 37

'ಲಂಡನ್'ನಲ್ಲಿ ಪ್ರಶಸ್ತಿ ಪಡೆದು ಬಂದ ದರ್ಶನ್ ಮಾಡಿದ ಟ್ವೀಟ್ ಏನು? ಲಂಡನ್ ಪಾರ್ಲಿಮೆಂಟ್ ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ 'ಗ್ಲೋಬಲ್ ಇಂಟೆಗ್ರಿಟಿ ಪ್ರಶಸ್ತಿ' ಪಡೆದುಕೊಂಡು ನಟ ದರ್ಶನ್ ಗೆ ಆ ಪ್ರಶಸ್ತಿನ್ನ ಕನ್ನಡದ ನಿರ್ಮಾಪಕ, ನಿರ್ದೇಶಕರು ಹಾಗೂ ಅಭಿಮಾನಿಗಳಿಗೆ ಅರ್ಪಿಸಿದ್ದರು. ಇದೀಗ, ಲಂಡನ್ ನಲ್ಲಿ ಪ್ರಶಸ್ತಿ ಪಡೆದು ಭಾರತಕ್ಕೆ ಬಂದಿಳಿದ ಚಾಲೆಂಜಿಂಗ್ ಸ್ಟಾರ್ ಟ್ವಿಟ್ಟರ್ ಮೂಲಕ ಎಲ್ಲರಿಗೂ ಕೃತಜ್ಞತೆಗಳನ್ನ ತಿಳಿಸಿದ್ದಾರೆ.''ಈ ಪ್ರಶಸ್ತಿ ಪುರಸ್ಕಾರಗಳೆಲ್ಲಾ ನೀವು ನೀಡಿದ್ದು. ನಿಮ್ಮ ಅಭಿಮಾನಕ್ಕೆ ಈ ನಿಮ್ಮ ದಾಸ ಯಾವಾಗಲೂ ಚಿರಋಣಿ. ಸದಾ ನಿಮ್ಮ ಪ್ರೀತಿ- ಪ್ರೋತ್ಸಾಹ ಕನ್ನಡ ಚಿತ್ರರಂಗದ ಮೇಲಿರಲಿ'' ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ತಮಗೆ ಶುಭಕೋರಿದ್ದ ಎಲ್ಲ ಸಿನಿತಾರೆಯರಿಗೂ ವೈಯಕ್ತಿಕವಾಗಿ ಧನ್ಯವಾದಗಳನ್ನ ತಿಳಿಸಿದ್ದಾರೆ. ಅಕ್ಟೋಬರ್ 18 ರಂದು ಲಂಡನ್ ಪಾರ್ಲಿಮೆಂಟ್ ನಲ್ಲಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ದರ್ಶನ್ ಅವರಿಗೆ 'ಗ್ಲೋಬಲ್ ಇಂಟೆಗ್ರಿಟಿ ಪ್ರಶಸ್ತಿ' ನೀಡಿ ಗೌರವಿಸಲಾಗಿತ್ತು.
Darshan won the global integrity award from 'London',, after he came to back he said this award goes to my fans,directors and producers. ..watch this video

Share This Video


Download

  
Report form
RELATED VIDEOS