Long route KSRTC buses halt at hotels where there is no appropriate facilities for people like washroom, a Facebook post of M.G Hedge now goes viral on social media. MG Hegde, from Mangalore has complained to the KSRTC officials about the problems which people are facing in the hotel.
ಊಟ ಮತ್ತು ತಿಂಡಿಗಾಗಿ ಕೆಎಸ್ಆರ್'ಟಿಸಿ ಬಸ್ಸುಗಳು ಎಲ್ಲೆಲ್ಲಾ ನಿಲ್ಲುತ್ತವೆಯೋ ಅಲ್ಲೆಲ್ಲಾ ಪ್ರಯಾಣಿಕರ ಸುಲಿಗೆ, ಕಳಪೆ ಸೇವೆ, ಗುಣಮಟ್ಟವಿಲ್ಲದ ಆಹಾರ ನೀಡುವುದು ನಿರಂತರವಾಗಿ ನಡೆಯುತ್ತಲೇ ಇದೆ. ಆದರೆ ಹೆಚ್ಚಿನ ಪ್ರಯಾಣಿಕರು ಹೀಗೆ ಸುಲಿಗೆ ನಡೆದಾಗ ಅನಿವಾರ್ಯವಾಗಿ ಹಣ ತೆತ್ತು ಗೊಣಗಿಕೊಂಡು ಸುಮ್ಮನಾಗುತ್ತಾರೆ ಅಷ್ಟೆ. ಆದರೆ ಮಂಗಳೂರಿನ ಹೋರಾಟಗಾರ ಎಂ.ಜಿ ಹೆಗಡೆ ಮಾತ್ರ ಇಷ್ಟಕ್ಕೆ ಸುಮ್ಮನಾಗದೆ, ಗ್ರಾಹಕರಿಗೆ ಹೋಟೆಲೊಂದರಲ್ಲಿ ನಡೆಯುತ್ತಿದ್ದ ಸುಲಿಗೆ ಬಗ್ಗೆ ಕೆಎಸ್ಆರ್'ಟಿಸಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಲ್ಲದೆ ಹೋಟೆಲ್ ಮೇಲೆ ಕ್ರಮ ಕೈಗೊಳ್ಳುವಂತೆ ಮಾಡಿದ್ದಾರೆ.