Baby elephant named as Parvati in Mysuru zoo by CM Siddaramaiah recently. Name of CM's wife also Parvati. It was a coincident, said by zoo authorities.
13 ವರ್ಷದ ಬಳಿಕ ಮೈಸೂರು ಮೃಗಾಲಯದಲ್ಲಿ ಆನೆ ಮರಿ ಜನನವಾಗಿದ್ದು, ಅದಕ್ಕೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಾರ್ವತಿ ಎಂದು ನಾಮಕರಣ ಮಾಡಿದ್ದಾರೆ.ಇನ್ನು ಸಿಎಂ ಸಿದ್ದರಾಮಯ್ಯ ಯಾವತ್ತಿಗೂ ಬಹಿರಂಗವಾಗಿ ತಮ್ಮ ಪತ್ನಿ ಮೇಲೆ ಪ್ರೀತಿ ತೋರ್ಪಡಿಸಿಲ್ಲ. ಅಷ್ಟೆ ಅಲ್ಲ, ಪತ್ನಿ ವಿಚಾರವನ್ನು ಅಷ್ಟಾಗಿ ಮಾತನಾಡಿಲ್ಲ. ಆದರೆ ಮೈಸೂರು ಮೃಗಾಲಯದಲ್ಲಿನ ಹೆಣ್ಣು ಆನೆ ಮರಿಗೆ ಕಾಕತಾಳೀಯ ಎಂಬಂತೆ ತಮ್ಮ ಪತ್ನಿಯ ಹೆಸರಾದ 'ಪಾರ್ವತಿ' ಎಂದು ನಾಮಕರಣ ಮಾಡಿದ್ದಾರೆ.