Mugwa Subrahmanya temple at Honnavar taluk, Karnataka, this temple visit can solve various ill effects of Mars and Rahu. Watch video for more details.
ವಿವಾಹ ಅಥವಾ ವಿವಾಹದ ನಂತರದ ದಾಂಪತ್ಯ ಜೀವನದಲ್ಲಿ ಸಮಸ್ಯೆ ಆಗಬಾರದು ಎಂದಾದಲ್ಲಿ ಜಾತಕದಲ್ಲಿ ಕುಜ ದೋಷ ಇರಬಾರದು. ಹಾಗೆ ಕುಜ ದೋಷ ಇದ್ದಲ್ಲಿ ಮೊದಲು ವಿವಾಹಕ್ಕೆ ಹಾಗೂ ವಿವಾಹದ ನಂತರ ಸುಖ ದಾಂಪತ್ಯ ಜೀವನ ನಡೆಸದಂತೆ ಕುಜ ದೋಷ ಅಡ್ಡಗೋಡೆ ಆಗಿ ನಿಲ್ಲುತ್ತದೆ. ಹೀಗಿರುವಾಗ ಈ ಎಲ್ಲ ಸಮಸ್ಯೆಗಳಿಗೂ ಮೂಲ ಕಾರಣ ಒಂದೇ ಅಗಿದ್ದಾಗ ಅದು ಸರ್ಪ ಶಾಪ ಅಥವಾ ನಾಗ ದೋಷ ಆಗಿದ್ದಲ್ಲಿ ಅಥವಾ ಕುಜ ದೋಷ ಆಗಿದ್ದಲ್ಲಿ ಸುಬ್ರಹ್ಮಣ್ಯ ದೇವರ ಆರಾಧನೆ ಬಹಳ ಪ್ರಾಮುಖ್ಯ ಹೊಂದಿರುತ್ತದೆ.'ಶ್ರೀ ಕ್ಷೇತ್ರ ಮುಗ್ವಾ ಸುಬ್ರಹ್ಮಣ್ಯ ದೇವರು'. ಅಂಥ ಪವಾಡ ಸದೃಶ ದೇಗುಲ ಇರುವುದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದಲ್ಲಿ.