JD(S) President HD Kumaraswamy assured that he will solve water problem for making alternative arrangements to Mahadayi by using Krishna river water. Government don’t think about in this way, moreover government has failed to utilize water from Krishna river allocated by tribunal he said in Dharwad.
ಮಹದಾಯಿ ಸಮಸ್ಯೆಗೆ ಪರ್ಯಾಯ ಆಲೋಚನೆ ಮಾಡುವಲ್ಲಿ ಸರ್ಕಾರ ಎಡವಿದ್ದು, ಈ ಸಮಸ್ಯೆ ನಿವಾರಣೆಗೆ ಕೃಷ್ಣ ನದಿಯಲ್ಲಿ ರಾಜ್ಯಕ್ಕೆ ಲಭ್ಯವಿರುವ ನೀರನ್ನು ಬಳಕೆ ಮಾಡಿಕೊಳ್ಳಲು ಅವಕಾಶವಿದ್ದರೂ ರಾಜ್ಯ ಸರ್ಕಾರ ಆ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷ್ಣ ನದಿಯ ಎ, ಬಿ ಸ್ಕೀಂ ಜಾರಿಗೊಳಿಸಿ ನೀರಿನ ಸಮಸ್ಯೆಗೆ ಇತಿಶ್ರೀ ಹಾಡಲಾಗುವುದು ಎಂದೂ ಅವರು ಭರವಸೆ ನೀಡಿದರು.