The AIADMK’s Karnataka Wing, led by the OPS camp, has accused KPCC President and former Home Minister G Parameshwara of facilitating Sasikala’s luxurious stay in the Bengaluru prison.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಶಿಕಲಾಗೆ ರಾಜಾತಿಥ್ಯ ನೀಡಲು ಕಾರಾಗೃಹ ಅಧಿಕಾರಿಗಳ ಜೊತೆ ಮಾಜಿ ಗೃಹ ಸಚಿವ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಕೂಡಾ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ತಮಿಳುನಾಡಿನ ಎಐಎಡಿಎಂಕೆಯ ಒ. ಪನ್ನೀರ್ ಸೆಲ್ವಂ ಬಣದ ನಾಯಕರೇ ಈ ಆರೋಪ ಮಾಡಿದ್ದಾರೆ. ಈ ಕುರಿತು ಎಐಎಡಿಎಂಕೆಯ ಕರ್ನಾಟಕ ಯುವ ಕಾರ್ಯದರ್ಶಿ ಆರ್ ಅನ್ಬುವೆಲ್ ಕುಮಾರ್ ಹೇಳಿಕೆ ನೀಡಿದ್ದಾರೆ.