A penalty of Rs 50, 000 will be imposed on those dumping waste in the stretch between Haridwar and Unnao of River Ganga, the National Green Tribunal (NGT) said on Thursday.
ಗಂಗಾ ನದಿಯಲ್ಲಿ ತ್ಯಾಜ್ಯ ಹಾಕುವವರಿಗೆ 50,000 ರು. ದಂಡ ವಿಧಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ) ಗುರುವಾರ ಆದೇಶ ಹೊರಡಿಸಿದೆ. ಗಂಗಾ ನದಿ ತಟದ ಉನ್ನಾವ್ ಮತ್ತು ಹರಿದ್ವಾರಗಳಲ್ಲಿ ನದಿ ಸಮೀಪ ಕಸ ಸುರಿಯುವುದನ್ನು ಕಟ್ಟು ನಿಟ್ಟಾಗಿ ತಡೆಯಬೇಕೆಂದು ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಅವರ ನೇತೃತ್ವದ ನ್ಯಾಯಪೀಠ ಅಲ್ಲಿನ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.