ಬಿಜೆಪಿಯವರು ಉಸಿರೆತ್ತದಂತೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಒಮ್ಮೆ ನಿಷೇಧಾಜ್ಞೆ ತೆಗೆಯಲಿ. ಲಕ್ಷ ಜನರನ್ನು ಸೇರಿಸಿ, ಮಂಗಳೂರಿನಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡೋಣ. ಈ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವರನ್ನೂ ಕರೆಸೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವೀರಾವೇಶದ ಮಾತನಾಡಿದರು.