Sanjjanaa Thrilling Skydive | Filmibeat Kannada

Filmibeat Kannada 2017-07-03

Views 13

Kannada Actress Sanjana Galrani does skydiving in America. Watch Video.

'ಸ್ಕೈ ಡೈವಿಂಗ್'.. ಒಂದು ಅಪಾಯಕಾರಿ ಸಾಹಸ ಅಂತ ಗೊತ್ತಿದ್ದರೂ, ಅದಕ್ಕೆ ಕೈಹಾಕಿ ಗಟ್ಟಿ ಗುಂಡಿಗೆ ಪ್ರದರ್ಶಿಸುವ ಇಚ್ಛೆ ಕೆಲವರಿಗೆ. ಅಂಥವರಲ್ಲಿ ಕನ್ನಡ ನಟಿ ಸಂಜನಾ ಗಲ್ರಾನಿ ಕೂಡ ಒಬ್ಬರು. ಶೂಟಿಂಗ್ ನಿಂದ ಕೊಂಚ ಬಿಡುವು ಮಾಡಿಕೊಂಡಿರುವ ನಟಿ ಸಂಜನಾ ಗಲ್ರಾನಿ ಸದ್ಯ ಅಮೇರಿಕಾದಲ್ಲಿ ಇದ್ದಾರೆ. ಕುಟುಂಬದೊಂದಿಗೆ ಅಮೇರಿಕಾ ಪ್ರವಾಸದಲ್ಲಿ ಇರುವ ಸಂಜನಾ, ಸ್ಕೈ ಡೈವಿಂಗ್ ಮಾಡಿ ಸಾಹಸ ಪ್ರದರ್ಶಿಸಿದ್ದಾರೆ.

ಹೆಲಿಕಾಫ್ಟರ್ ಹತ್ತುವ ಮೊದಲು 'ಕೊಂಚ ನರ್ವಸ್ ಆಗಿದ್ದೇನೆ' ಎಂದು ಹೇಳಿದ ಸಂಜನಾ, ಚಲಿಸುತ್ತಿರುವ ಹೆಲಿಕಾಫ್ಟರ್ ನಿಂದ 13,500 ಅಡಿ ಎತ್ತರದಿಂದ ಜಿಗಿದ್ಮೇಲೆ ರೋಮಾಂಚನಗೊಂಡರು.

ಸಾವಿರಾರು ಅಡಿ ಎತ್ತರದಿಂದ ನೆಲಕ್ಕೆ ಜಿಗಿಯುವುದನ್ನು ನೆನೆಸಿಕೊಂಡರೆ ಸಾಕು ಜೀವ ಝಲ್ ಎನ್ನುತ್ತದೆ. ಅಂಥದ್ರಲ್ಲಿ ನಟಿ ಸಂಜನಾ ಈ ಅಪಾಯಕಾರಿ ಸಾಹಸವನ್ನ ನೀರು ಕುಡಿದಷ್ಟೇ ಸಲೀಸಾಗಿ ಮಾಡಿ ಎಲ್ಲರೂ ಬಾಯಿ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ಸ್ಕೈ ಡೈವಿಂಗ್ ಮಾಡಿದ ಬಳಿಕ, ''ಇದೊಂದು ರೋಮಾಂಚನಕಾರಿ ಅನುಭವ. ನನ್ನ ಕನಸು ನನಸಾಯಿತು'' ಎಂದು ಖುಷಿಯಿಂದ ನಟಿ ಸಂಜನಾ ಹೇಳಿಕೊಂಡಿದ್ದಾರೆ

Share This Video


Download

  
Report form
RELATED VIDEOS