Weekend With Ramesh 3 | Ganesh With Her Mother | Filmibeat Kannada

Filmibeat Kannada 2017-07-03

Views 1

Kannada Actor Ganesh's Mother Sulochana speaks about Ganesh childhood days in Weekend With Ramesh-3

ಗೋಲ್ಡನ್ ಸ್ಟಾರ್ ಗಣೇಶ್ ಈ ವಾರ ವೀಕೆಂಡ್ ಸಾಧಕರ ಸೀಟಿನಲ್ಲಿ ಕುಳಿತುಕೊಂಡಿದ್ರು . ತಮ್ಮ ವೈಯಕ್ತಿಕ ಹಾಗೂ ವೃತ್ತಿ ಬದುಕನ್ನ ಕನ್ನಡ ಜನತೆಯ ಮುಂದೆ ಬಿಚ್ಚಿಟ್ರು . 'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಯ ಕೊನೆಯ ಅತಿಥಿ ನಟ ಗಣೇಶ್ ಆಗಿದ್ದು, ವೀಕೆಂಡ್ ಕಾರ್ಯಕ್ರಮಕ್ಕೆ ಗ್ರ್ಯಾಂಡ್ ಆಗಿ ಬೀಳ್ಕೊಡುಗೆ ನೀಡಿತು ಜೀ ಕನ್ನಡ ತಂಡ. ಈ ಮಧ್ಯೆ ಗಣೇಶ್ ಅವರ ಎಪಿಸೋಡ್ ನಲ್ಲಿ ಗಣೇಶ್ ಅವರ ತಾಯಿ ಸುಲೋಚನಾ ಅವರು, ತಮ್ಮ ಮಗನ ಬಗ್ಗೆ ಮಾತನಾಡಿದ್ದಾರೆ. ಗಣೇಶ್ ಚಿಕ್ಕ ವಯಸ್ಸಿನಲ್ಲಿ ಹೇಗಿದ್ದರು, ಗಣೇಶ್ ಅವರ ಸಿನಿಮಾ ಕನಸು ಏನಾಗಿತ್ತು, ಅದಕ್ಕಾಗಿ ಅವರು ಏನೂ ಮಾಡುತ್ತಿದ್ದರು ಎಂಬ ಕೆಲವೊಂದು ಇಂಟ್ರೆಸ್ಟಿಂಗ್ ವಿಷ್ಯಗಳನ್ನ ವೀಕೆಂಡ್ ಟೆಂಟ್ ನಲ್ಲಿ ಹಂಚಿಕೊಂಡಿದ್ದಾರೆ.


''ಚಿಕ್ಕ ವಯಸ್ಸಿನಲ್ಲಿ ಸ್ಕೂಲ್ ಗೆ ಹೋಗ್ತಿರಲಿಲ್ಲ. ಚಕ್ಕರ್ ಹಾಕಿ ಸಿನಿಮಾ ನೋಡೋಕೆ ಹೋಗ್ತಿದ್ದ. ಚಿಕ್ಕ ಹುಡುಗ ಇದ್ದಾಗಿಂದಲೂ ಅದು ಅಭ್ಯಾಸವಾಗಿ ಬಿಟ್ಟಿತ್ತು. ನೆಲಮಂಗಲ, ದಾಸರಹಳ್ಳಿಯಲ್ಲಿ ಇದೇ ಕೆಲಸ'' - ಸುಲೋಚನಾ, ಗಣೇಶ್ ತಾಯಿ

Share This Video


Download

  
Report form
RELATED VIDEOS