Star celebrities Have to Suffer By GST Effect . For more information watch this video
ಕನ್ನಡ ಸ್ಟಾರ್ ನಟ-ನಟಿಯರಿಗೆ ಈ ಸುದ್ದಿ ಕೊಂಚ ಬೇಸರ ತರುವುದಂತು ನಿಜ. ಇಷ್ಟು ದಿನ ಕೋಟಿ ಕೋಟಿ ಸಂಪಾದಿಸಿ ಇಟ್ಟುಕೊಳ್ತಾ ಇದ್ರು. ಆದರೆ ಈಗ ಜಿ.ಎಸ್.ಟಿ ವ್ಯಾಪ್ತಿಗೆ ನಟ-ನಟಿಯರು ಒಳಪಡುತ್ತಾರೆ ಎನ್ನುವ ಸುದ್ದಿ ನಟರಿಗೆ ಶಾಕ್ ನೀಡಿದೆ.
ಅದರಲ್ಲೂ ಒಂದೊಂದು ಸಿನಿಮಾಗೆ ಕೋಟಿ ಸಂಭಾವನೆ ಪಡೆಯುತಿದ್ದವರೆಲ್ಲರೂ 28% ತೆರಿಗೆ ಕಟ್ಟಲೇ ಬೇಕು.ವರ್ಷಕ್ಕೆ 20 ಲಕ್ಷಕ್ಕಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದರೆ ಅವರೆಲ್ಲರೂ ಕೂಡ 28% ಪ್ರತಿ ಶತದಷ್ಟು ತೆರಿಗೆ ಕಟ್ಟಲೇಬೇಕು.
ಕನ್ನಡದ ಸ್ಟಾರ್ ನಟರಾದ, ಪುನೀತ್ ರಾಜಕುಮಾರ್, ಶಿವಣ್ಣ, ಸುದೀಪ್, ದರ್ಶನ್, ಯಶ್ ಎಲ್ಲರಿಗೂ 5-6 ಕೋಟಿ ಸಂಭಾವನೆ ಇದೆ.ಇದುವರೆಗೂ ನಟ-ನಟಿಯರು ಸೇವಾ ತೆರಿಗೆ ಮಾತ್ರ ಕಟ್ಟುತಿದ್ದರು. ಆದರೆ ಈಗ ಜಿ ಎಸ್ ಟಿ ತೆರಿಗೆಯನ್ನೂ ಕಟ್ಟಬೇಕು.
ಸ್ಟಾರ್ ನಟರಾದ, ಸುದೀಪ್, ಪುನೀತ್, ಯಶ್, ದರ್ಶನ್ ಅವರ ಆದಾಯ 5-6 ಕೋಟಿ ಇದೆ. ಹಾಗಾಗಿ ಇವರೆಲ್ಲರೂ ಸುಮಾರು 1.58 ಕೋಟಿ ಜಿ ಎಸ್ ಟಿ ತೆರಿಗೆ ಕಟ್ಟಬೇಕಾಗುತ್ತದೆ. ನಟ-ನಟಿ, ನಿರ್ಮಾಪಕರು, ನಿರ್ದೇಶಕರು, ಪೋಷಕ ನಟರು ಎಲ್ಲರೂ ಸಹ ಇನ್ನು ಮುಂದೆ ಕೋಟಿ ಕೋಟಿ ತೆರಿಗೆ ಕಟ್ಟಲಿದ್ದಾರೆ.
20 ಲಕ್ಷ ಆದಾಯವಿದ್ದರೆ, 5.60 ಲಕ್ಷ ತೆರೆಗೆ ಕಟ್ಟಬೇಕು. ಅದೇ 5 ಕೋಟಿ ಸಂಪಾದನೆ ಇದ್ದರೆ, 1.30 ಕೋಟಿ ತೆರಿಗೆ ಕಟ್ಟಬೇಕಾಗುತ್ತದೆ. ಇದರ ಬಗ್ಗೆ ಈಗಾಗಲೇ ಸಿನಿಮಾ ರಂಗದವರಿಗೆ ಮಾಹಿತಿಯನ್ನು ತೆರಿಗೆ ಇಲಾಖೆ ನೀಡಿದೆ.