Chiranjeevi Sarja express his desire to share screen space with his brother Dhruva Sarja.
'ವಾಯುಪುತ್ರ', 'ಚಂದ್ರಲೇಖ', 'ರುದ್ರ ತಾಂಡವ'... ಹೀಗೆ ಹಲವಾರು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳಲ್ಲಿ ಅಭಿನಯಿಸಿರುವ ಚಿರಂಜೀವಿ ಸರ್ಜಾ ನಟನೆಯ 'ಆಕೆ' ಚಿತ್ರ ಇನ್ನೇನು ಬಿಡುಗಡೆ ಆಗಲಿದೆ. ಹೀಗಿರುವಾಗಲೇ, ತಮ್ಮ ಮನದೊಳಗಿರುವ ಒಂದು ಆಸೆಯನ್ನ ಚಿರಂಜೀವಿ ಸರ್ಜಾ ಹೊರಹಾಕಿದ್ದಾರೆ. ಅದೇನಪ್ಪಾ ಅಂದ್ರೆ, ನಟ ಚಿರಂಜೀವಿ ಸರ್ಜಾ ರವರಿಗೆ ಸಹೋದರ ಧ್ರುವ ಸರ್ಜಾ ಜೊತೆ ನಟಿಸುವ ಬಯಕೆ ಇದ್ಯಂತೆ. ಒಂದೇ ಸಿನಿಮಾದಲ್ಲಿ ಅಣ್ಣ-ತಮ್ಮಂದಿರಿಬ್ಬರೂ ಕಾಣಿಸಿಕೊಳ್ಳಬೇಕು ಎಂಬುದೇ ಚಿರಂಜೀವಿ ಸರ್ಜಾ ರವರ ಬಹುದಿನಗಳ ಕನವರಿಕೆ.
'ಒಂದೇ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ, ಧ್ರುವ ಎದುರು ನಾನು ವಿಲನ್ ಆಗಲು ಸಿದ್ಧ'' ಎನ್ನುತ್ತಾರೆ ಚಿರಂಜೀವಿ ಸರ್ಜಾ. ''ಹಾಗೊಂದು ವೇಳೆ, ಧ್ರುವ ಸರ್ಜಾ ಹೀರೋ ಆಗಿ, ನಾನು ವಿಲನ್ ಆದರೂ... ಸಿನಿಮಾದಲ್ಲಿ ಇಬ್ಬರಿಗೂ ಸಮಾನ ಅವಕಾಶ ಇರಬೇಕು. ಅಂತಹ ಸಬ್ಜೆಕ್ಟ್ ಸಿಕ್ಕರೆ, ನಾನು ರೆಡಿ'' ಅಂತಾರೆ ಚಿರಂಜೀವಿ ಸರ್ಜಾ. ''ನನಗೆ 'ಬ್ರದರ್ಸ್' ಎಂಬ ಇಂಗ್ಲೀಷ್ ಸಿನಿಮಾ ರೀಮೇಕ್ ಮಾಡಿ, ನಾವಿಬ್ಬರೂ ಜೊತೆಯಾಗಿ ನಟಿಸಬೇಕೆಂಬ ಆಸೆ. ಆದ್ರೆ, ಧ್ರುವಗೆ ಆ ಸಿನಿಮಾ ಸ್ವಲ್ಪ ಸ್ಲೋ ನರೇಶನ್ ಎನಿಸುತ್ತದೆ. ಹೀಗಾಗಿ ಬೇಡ ಅಂತಾನೆ. ಒಳ್ಳೆಯ ಕಥೆ ಸಿಕ್ಕರೆ ಖಂಡಿತ ಇಬ್ಬರೂ ತೆರೆ ಹಂಚಿಕೊಳ್ಳುತ್ತೇವೆ'' ಎಂಬುದು ಚಿರಂಜೀವಿ ಸರ್ಜಾ ರವರ ಮಾತು. ಚಿರಂಜೀವಿ ಸರ್ಜಾ ರವರ ಈ ಆಸೆ ಯಾವ ನಿರ್ದೇಶಕರಿಗೆ ಕೇಳಿಸಿದ್ಯೋ ಗೊತ್ತಿಲ್ಲ. ಅಷ್ಟಕ್ಕೂ, ಚಿರು ರವರ ಬಯಕೆಯನ್ನ ಯಾರು ನೆರವೇರಿಸುತ್ತಾರೋ ಕಾದು ನೋಡೋಣ