Yash Is Not Acting In Darshan’s Kurukshetra Movie | Filmibeat Kannada

Filmibeat Kannada 2017-06-27

Views 8

Kannada Actor Rocking Star Yash has taken his Facebook page to clarifie, 'He is not part of 'Kurukshetra' Movie'.


ಚಂದನವನದಲ್ಲಿ ಸದ್ಯದಲ್ಲಿ ಸೆಟ್ಟೇರದೇ ದಿನದಿಂದ ದಿನಕ್ಕೆ ಅತಿ ಹೆಚ್ಚು ಕುತೂಹಲ ಮೂಡಿಸುತ್ತಿರುವ ಚಿತ್ರ 'ಕುರುಕ್ಷೇತ್ರ'. 'ಕುರುಕ್ಷೇತ್ರ' ಚಿತ್ರದ ಒಂದೊಂದೆ ಪಾತ್ರಗಳು ನಿಧಾನವಾಗಿ ಬಹಿರಂಗವಾಗುತ್ತಿವೆ. ಚಿತ್ರದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರು ಮತ್ತು ಹಿರಿಯ ನಟರು ಅಭಿಸುವ ಬಗ್ಗೆ ಕೇಳಿಬಂದಿದ್ದು, ಈಗಾಗಲೇ ರವಿಚಂದ್ರನ್, ದರ್ಶನ್ ನಟಿಸುವುದು ಪಕ್ಕಾ ಆಗಿರುವುದರಿಂದ ಚಿತ್ರದ ಬಗೆಗಿನ ನಿರೀಕ್ಷೆ ಮಟ್ಟ ಬೆಟ್ಟದಷ್ಟಾಗಿದೆ. ಅಂದಹಾಗೆ ಚಿತ್ರದ ಬಗೆಗಿನ ಲೇಟೆಸ್ಟ್ ಸುದ್ದಿ ಏನಂದ್ರೆ ರಾಕಿಂಗ್ ಸ್ಟಾರ್ ಯಶ್ 'ಕುರುಕ್ಷೇತ್ರ ಚಿತ್ರದಲ್ಲಿ ನಟಿಸುತ್ತಾರಾ? ಎಂಬ ಕುತೂಹಲಕಾರಿ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ನಿರ್ಮಾಪಕ ಮುನಿರತ್ನ ರವರು ಕನ್ನಡದ ಬಿಗ್‌ ಸ್ಟಾರ್ ಗಳಾದ ಸುದೀಪ್, ದರ್ಶನ್, ಉಪೇಂದ್ರ, ಪುನೀತ್ ರಾಜ್ ಕುಮಾರ್ ಹಾಗೂ ಯಶ್ ರವರ ಮಹಾಸಂಗಮದಲ್ಲಿ 'ಕುರುಕ್ಷೇತ್ರ' ಸಿನಿಮಾ ಮಾಡುವ ಮಹಾದಾಸೆ ಹೊಂದಿದ್ದರು. ಆದರೆ ಈ ಸ್ಟಾರ್ ಗಳ ಪೈಕಿಯಲ್ಲಿ ದರ್ಶನ್ ಒಬ್ಬರು ಮಾತ್ರ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಸುದೀಪ್ ಈ ಚಿತ್ರದಲ್ಲಿ ನಟಿಸುವುದಿಲ್ಲ ಎಂಬ ಬಗ್ಗೆ ಖಚಿತ ಪಡಿಸಿದ್ದಾರೆ. ಈಗ ಹಲವು ದಿನಗಳಿಂದ ಕಾಡುತ್ತಿದ್ದ 'ಯಶ್ ಈ ಚಿತ್ರದಲ್ಲಿ ನಟಿಸುತ್ತಾರಾ?' ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

'ಕುರುಕ್ಷೇತ್ರ' ಚಿತ್ರದಲ್ಲಿ ನಟಿಸುವ ಬಿಗ್ ಸ್ಟಾರ್ ಗಳ ಪೈಕಿ ಯಶ್ ರವರ ಹೆಸರು ಕೇಳಿಬಂದಿತ್ತು. ಆದರೆ ಈವರೆಗೆ ಯಶ್ ಈ ಚಿತ್ರದಲ್ಲಿ ಅಭಿನಯಿಸುತ್ತಾರಾ/ಇಲ್ಲವೋ ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿರಲಿಲ್ಲ. ಈಗ ಅದಕ್ಕೆ ಸ್ವತಃ ಯಶ್ ರವರೇ ಉತ್ತರಿಸಿದ್ದು ನಾನು ಚಿತ್ರದಲ್ಲಿ ಅಭಿನಯಿಸುತ್ತಿಲ್ಲ ಎಂದಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಒಬ್ಬರು ಅವರ ಫೇಸ್ ಬುಕ್ ಪುಟದಲ್ಲಿ, "ಅಣ್ಣಾ ನೀವು ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸುತ್ತೀರಾ???" ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಯಶ್ 'NO' ಎಂದು ಉತ್ತರಿಸಿದ್ದಾರೆ. ಇದರಿಂದ ಯಸ್ 'ಕುರುಕ್ಷೇತ್ರ' ಚಿತ್ರದಲ್ಲಿ ಕಾಣಿಸುಕೊಳ್ಳುವುದಿಲ್ಲ ಎಂಬುದು ಪಕ್ಕಾ ಆಗಿದೆ.

ಕನ್ನಡಿಗರ ನೆಚ್ಚಿನ 'ರಾಜಾಹುಲಿ' ಯಶ್ ರವರು ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ಚಿತ್ರದಲ್ಲಿ ಬ್ಯುಸಿ ಆಗಿದ್ದು, ಹಿಂದೆಂದಿಗೂ ಕಂಡಿರದ ವಿಭಿನ್ನ ಲುಕ್ ನಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ವಿಜಯ್ ಕಿರಂಗಂದೂರ್ ಬಂಡವಾಳ ಹೂಡಿದ್ದಾರೆ.


Share This Video


Download

  
Report form
RELATED VIDEOS