Esha Deol was recently seen flaunting her baby bump for the first time. Esha Deol's best buddy Shilarna Vaze aka Chef Chinu, who is also pregnant, posted this snapshot on Instagram while waiting at the doctor's clinic. Watch video to know more.
ಹೇಮಾಮಾಲಿನಿ ಮಗಳು ಇಶಾ ಡಿಯೋಲ್ ತನ್ನ ಮೊದಲ ಮಗುವಿನ ಆಗಮನಕ್ಕೆ ಕಾಯುತ್ತಿದ್ದಾಳೆ. 2012ರಲ್ಲಿ ಭರತ್ ತಖ್ತನಿ ಜೊತೆ ಸಂಬಂಧ ಬೆಸೆದುಕೊಂಡ ಇಶಾ ಈಗ ಗರ್ಭಿಣಿ. ಹೇಮಾಮಾಲಿನಿಯೇ ಖುದ್ದು ಇಶಾ ತಾಯಿಯಾಗುತ್ತಿರುವ ಸುದ್ದಿಯನ್ನು ಮೊದಲು ಟ್ವೀಟರ್ ನಲ್ಲಿ ತಿಳಿಸಿದ್ದಳು.
ಸದ್ಯ ತಾಯ್ತನದ ಸವಿ ಸವಿಯುತ್ತಿರುವ ಇಶಾ, ಮೊದಲಬಾರಿಗೆ ತನ್ನ ಬೇಬಿ ಬಪ್ ಪೋಟೊ ಹರಿಯಬಿಟ್ಟಿದ್ದಾಳೆ. ಇನ್ನೊಂದು ವಿಶೇಷ ಎಂದರೆ ಆಕೆ ಸ್ನೇಹಿತೆ ಕೂಡ ಈಗ ತಾಯಿಯಾಗುತ್ತಿದ್ದಾಳೆ. ಆತ್ಮೀಯ ಗೆಳೆಯರಿಬ್ಬರು ಒಟ್ಟಿಗೆ ಮಗುವಿನ ನಿರೀಕ್ಷೆ ಮಾಡುತ್ತಿದ್ದೇವೆ. ಇದು ನಿಜಕ್ಕೂ ಸಂತೋಷದ ಸುದ್ದಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.