NICE Road Scam: House Committee Members Unhappy With TB Jayachandra for Unable To Successfully Implement Their Demands.....,
ನೈಸ್ ಸಂಸ್ಥೆ ವಿರುದ್ಧದ ಅವ್ಯವಹಾರ ಆರೋಪ ಪ್ರಕರಣದಲ್ಲಿ ಸದನ ಸಮಿತಿ ಬೇಡಿಕೆ ಅನುಷ್ಠಾನಗೊಳ್ಳದ್ದಕ್ಕೆ ಸದನ ಸಮಿತಿಯ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ. ಈವರೆಗೂ ಸದನ ಸಮಿತಿ ಬೇಡಿಕೆ ಅನುಷ್ಠಾನಗೊಳದ್ದಕ್ಕೆ ಸಮಿತಿ ಅಧ್ಯಕ್ಷ ಟಿ.ಬಿ.ಜಯಚಂದ್ರ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.
ಸಮಿತಿ ಸದಸ್ಯರಾದ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ, ಯಲಹಂಕದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್, ಕೊರಟಗೆರೆಯ ಜೆಡಿಎಸ್ ಶಾಸಕ ಸುಧಾಕರ್ ಲಾಲ್, ಅರಸೀಕರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹಕ್ಕೆ ಮಧ್ಯಂತರ ತಡೆ, ರಸ್ತೆಗೆ ಭೂಮಿ ನೀಡಿದ್ದ ರೈತರ ಜೊತೆ ಚರ್ಚೆ ನಡೆಸಬೇಕು ಮುಂತಾದ ಬೇಡಿಕೆಯನ್ನು ಸದಸ್ಯರು, ಸದನ ಸಮಿತಿಯ ಸಭೆಯಲ್ಲಿ ಇಟ್ಟಿದ್ದರು. ಆದರೆ ಈವರೆಗೂ ಸದಸ್ಯರ ಬೇಡಿಕೆ ಅನುಷ್ಠಾನವಾಗಿಲ್ಲ. ಸಮಿತಿಯ ಅಧ್ಯಕ್ಷ ಜಯಚಂದ್ರ ಕೇವಲ ಕಾಟಾಚಾರಕ್ಕೆ ಸಭೆ ಕರೆಯುತ್ತಿದ್ದಾರೆ. ಸಭೆಗೆ ಸಮಯಕ್ಕೆ ಸರಿಯಾಗಿ ಸಭೆಗೂ ಬರುತ್ತಿಲ್ಲ ಅಂತಾ ಸದನ ಸಮಿತಿ ಸದಸ್ಯರು ಟಿ.ಬಿ.ಜಯಚಂದ್ರ ವಿರುದ್ಧ ಗರಂ ಆಗಿದ್ದಾರೆ.
NICE Road,NICE Road scam,NICE Road Fraud,NICE Road Scandal,Nandi Infrastructure Corridor Enterprises,House Committee on NICE,NICE House Committee,TB Jayachandra,TB Jayachandra NICE Panel,TB Jayachandra Videos,Videos for TB Jayachandra,TV9,news,Videos