TV9 News: Tamil Nadu Chief Minister Panneerselvam To Face First Assembly Session 'Today'.....,
ಜಯಲಲಿತಾ ಅವರಿಗೆ ಜೈಲು ಶಿಕ್ಷೆ ನಂತರ ರಚನೆಯಾದ ಪನ್ನೀರ್ ಸೆಲ್ವಂ ಸರ್ಕಾರದ ಮೊದಲ ವಿಧಾನಸಭಾ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಈ ಎರಡು ತಿಂಗಳಲ್ಲಿ ತಮಿಳುನಾಡಿನಲ್ಲಾದ ಅನೇಕ ಬೆಳವಣಿಗೆಗಳು, ಕಾನೂನು ಸುವ್ಯವಸ್ಥೆ ಪರಿಸ್ಥಿತಿ, ಕಾವೇರಿ ಮೇಕೆದಾಟು ಯೋಜನೆ, ಮುಲ್ಲೈಪೆರಿಯಾರ್ ಸಮಸ್ಯೆ , ಶ್ರೀಲಂಕಾದಲ್ಲಿ ಸೆರೆಯಾಗುತ್ತಿರುವ ತಮಿಳು ಮೀನುಗಾರರು ಸೇರಿದಂತೆ ಹಲವು ವಿಷಯಗಳಲ್ಲಿ ಪನ್ನೀರ್ ಸೆಲ್ವಂ ಸರ್ಕಾರ ಪ್ರತಿ ಪಕ್ಷಗಳಿಂದ ಪ್ರಶ್ನೆಗಳನ್ನ ಎದುರಿಸಲಿವೆ. ಇನ್ನೂ ಹಾಲಿನ ದರ ಏರಿಕೆ, ವಿದ್ಯುತ್ ದರ ಏರಿಕೆ ವಿಷಯಗಳು, ಜಯಾ ಹೆಸರಿನ ಯೋಜನೆಗಳ ಮುಂದುವರಿಕೆ ಬಗ್ಗೆ ಅಧಿವೇಷನದಲ್ಲಿ ಚೆರ್ಚೆ ನಡೆಯಲಿವೆ.
…......................
ಇನ್ನು ಅಧಿವೇಶನದ ಕಾಲಾವಧಿ ಕೇವಲ ಮೂರು ದಿನಕ್ಕೆ ಮಾತ್ರ ನಿರ್ಧರಿಸಲಾಗಿದೆ. ಇವತ್ತು ನಾಳೆ ಹಾಗೂ ಸೋಮವಾರ ಸೇರಿದಂತೆ ಮೂರು ದಿನ ಮಾತ್ರ ಕಲಾಪ ನಡೆಯಲಿದೆ. ಕಲಾಪದ ಮೂರು ದಿನಗಳಲ್ಲಿ ಎರಡು ದಿನ ಸರ್ಕಾರದ ಹೆಚ್ಚುವರಿ ಬಜೆಟ್ ಪ್ರಸ್ತಾವನೆ , ಮತ್ತು ಸರ್ಕಾರದ ಮಸೂದೆ ಮಂಡನೆಗಳಿಗೆ ಮೀಸಲಿಡಲಾಗಿದೆ