Chennai: IIT-M Students 'Hug and Kiss' In Campus To Protest Moral Policing

TV9 Kannada 2014-11-15

Views 3

TV9 News: Chennai: IIT-M Students 'Hug and Kiss' In Campus To Protest Moral Policing...,
ನೈತಿಕ ಪೊಲೀಸ್ ಗಿರಿ ವಿರುದ್ಧದ ಪ್ರತಿಭಟನೆ ಈಗ ಚೆನ್ನೈಗೆ ತಲುಪಿದೆ. ಚೆನ್ನೈನ ಐಐಟಿ ವಿದ್ಯಾರ್ಥಿಗಳು ನೈತಿಕ ಪೊಲೀಸ್ ಗಿರಿ ವಿರುದ್ಧ ಕ್ಯಾಂಪಸ್ ಒಳಗೆ ಮತ್ತು ಹೊರಗೂ ಒಬ್ಬರನ್ನೊಬ್ಬರು ಆಲಂಗಿಸಿ ಮುತ್ತಿಟ್ಟುಕೊಂಡು ಪ್ರತಿಭಟನೆ ನಡೆಸಿದರು. ದೇಶದೆಲ್ಲೆಡೆ ನೈತಿಕ ಪೊಲೀಸ್ ಗಿರಿ ಅಥವಾ ಸಂಸ್ಕೃತಿಕ ಪೊಲೀಸ್ ಗಿರಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ಚೆನ್ನೈ ಐಐಟಿ ವಿದ್ಯಾರ್ಥಿಗಳು ಬಹಿರಂಗವಾಗಿ ಇಂದು ಈ ಆಂದೋಲನ ನಡೆಸಿದರು. ಕ್ಯಾಂಪಸ್ ನ ಒಳಗೆ ಮತ್ತು ಹೊರಗೆ ತಮ್ಮ ಪ್ರೀತಿ ಪ್ರೇಮ ಬಂಧವನ್ನು ತೋರ್ಪಡಿಸಲು ಯಾರೂ ಅಡ್ಡಬರಬಾರದು. ಸಂಸ್ಖೃತಿ ಹೆಸರಲ್ಲಿ ತಮಗೆ ಯಾರೂ ತಡೆ ಒಡ್ಡಬಾರದೆಂಬ ಕೋರಿಕೆ ಮತ್ತು ಸಾಂಸ್ಕೃತಿಕ ಪೊಲೀಸ್ ಗಿರಿ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಒಬ್ಬರನ್ನೊಬ್ಬರು ತಬ್ಬಿ, ಮುತ್ತಿಟ್ಟುಕೊಂಡರು. ಐಐಟಿ ವಿದ್ಯಾರ್ಥಿಗಳು ದಿಢೀರನೆ ಈ ಕಾರ್ಯಕ್ರಮ ಆಯೋಜಿಸಿದ್ದು ಮತ್ತು ಸಾರ್ವಜನಿಕವಾಗಿ ಕಾರ್ಯಕ್ರಮದ ಮಾಹಿತಿ ನೀಡದ ಕಾರಣ ಇದಕ್ಕೆ ಬಹಿರಂಗವಾಗಿ ವಿರೋಧ ವ್ಯಕ್ತವಾಗಿರಲಿಲ್ಲ. ಯಾರೂ ಈ ಕಾರ್ಯಕ್ರಮ ತಡೆಯಲು ಪ್ರಯತ್ನವನ್ನೂ ಮಾಡಲಿಲ್ಲ. ಆದರೆ ಐಐಟಿ ಆಡಳಿತಮಂಡಳಿ ಮಾತ್ರ ಕ್ಯಾಂಪಸ್ ಒಳಗೆ ಹೊರಗಿನವರು ಮತ್ತು ಮಾಧ್ಯಮದವರ ಪ್ರವೇಶವನ್ನು ತಡೆದಿತ್ತು. ಕ್ಯಾಂಪಸ್ ಒಳಗೆ ತಮ್ಮತಮ್ಮಲ್ಲೇ ಕಿಸ್ ಆಫ್ ಲವ್ ಕಾರ್ಯಕ್ರಮ ಆರಂಭಿಸಿದ ವಿದ್ಯಾರ್ಥಿಗಳಿಗೆ ಮಾಧ್ಯಮದವರನ್ನು ತಡೆದ ಮಾಹಿತಿ ದೊರೆತೊಡನೆ, ಕ್ಯಾಂಪಸ್ ನಿಂದ ಹೊರ ಬಂದು ತಮ್ಮ ಪ್ರತಿಭಟನೆ ಮುಂದುವರೆಸಿದರು. ಕಳೆದವಾರ ಕೇರಳದಲ್ಲಿ ಇದೇ ರೀತಿಯ ಪ್ರತಿಭಟನೆ ನಡೆದಿದ್ದು, ಅದಕ್ಕೆ ಭಾರೀ ವಿರೋಧವೂ ವ್ಯಕ್ತವಾಗಿತ್ತು.

Share This Video


Download

  
Report form